ಬೆಂಗಳೂರು ಉತ್ತರ: ಪರಪ್ಪನ ಅಗ್ರಹಾರದಲ್ಲಿ ಉಗ್ರರಿಗೆ, ರೇಪಿಸ್ಟ್ ಗಳಿಗೆ ರಾಜಾತಿಥ್ಯ; ಪೊಲೀಸ್ ಅಧಿಕಾರಿಗಳ ಸಭೆ ಕರೆದಿದ್ದೇನೆ: ನಗರದಲ್ಲಿ ಪರಮೇಶ್ವರ್
ಉಗ್ರರಿಗೆ, ರೇಪಿಸ್ಟ್ ಗಳಿಗೆ ಜೈಲಿನಲ್ಲಿ ರಾಜಾತಿಥ್ಯ ವಿಚಾರಕ್ಕೆ ಸಂಬಂಧಿಸಿ ಭಾನುವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಸದಾಶಿವನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಡಾ. ಜಿ ಪರಮೇಶ್ವರ್ ಅವರು, ಹಿಂದೆ ಕೂಡ ಬಹಳ ಕಡೆ ಆದಾಗ ಅಧಿಕಾರಿಗಳನ್ನ ಸಸ್ಪೆಂಡ್ ಮಾಡಿ ಕ್ರಮ ಜರುಗಿಸಿದ್ದೇವೆ. ಪರಪ್ಪನ ಅಗ್ರಹಾರದಲ್ಲೂ ಹಿಂದೆ ತಪ್ಪಿತಸ್ಥರನ್ನ ಸಸ್ಪೆಂಡ್ ಮಾಡಿ ಕ್ರಮ ಆಗಿದೆ. ಬಿ ದಯಾನಂದ್ ಅವರನ್ನ ಮುಖ್ಯಸ್ಥರನ್ನಾಗಿ ಮಾಡಿದ್ದೇವೆ. ನಿನ್ನೆ ಅವರು ರಜೆ ಇದ್ರು, ಅವರ ಜೊತೆ ಮಾತಾಡಿದ್ದೇನೆ. ತನಿಖೆ ಮಾಡಿ ವರದಿ ಕೊಡಿ ಅಂತಾ ಕೇಳಿದ್ದೇನೆ. ಇಂಥದ್ದನ್ನೆಲ್ಲಾ ಸಹಿಸಿಕೊಳ್ಳಲು ಆಗಲ್ಲ, ಹೀಗೆಲ್ಲಾ ಆಗ್ತಿದ್ರೆ ಅದು ಜೈಲು ಅನಿಸಿಕೊಳ್ಳಲ್ಲ. ಪೊಲೀಸ್ ಅಧಿಕಾರಿಗಳ ಸಭೆ ಕರೆಯುತ್ತೇನೆ ಎಂದರು.