ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಿಂದ ಹರದನಹಳ್ಳಿ, ಗುಂಡ್ಲುಪೇಟೆ ಮತ್ತು ಬೇಗೂರು ಉಪವಿಭಾಗ ವ್ಯಾಪ್ತಿಯಲ್ಲಿ 3ನೇ ತ್ರೈಮಾಸಿಕ ನಿರ್ವಹಣೆ ಕಾಮಗಾರಿಯನ್ನು ಡಿಸೆಂಬರ್ 6 ರಂದು ಹಮ್ಮಿಕೊಂಡಿರುವುದರಿಂದ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದೆ. ಗುಂಡ್ಲುಪೇಟೆ. ಬರಗಿ, ಕೋಡಿಹಳ್ಳಿ, ಬೇರಂಬಾಡಿ, ನೆನೆಕಟ್ಟೆ, ವೀರನಪುರ, ಬೆಳವಾಡಿ, ಬಾಚಳ್ಳಿ, ಬೊಮ್ಮಲಾಪುರ, ದಾರಿಬೇಗೂರು, ಕೊಡಸೋಗೆ, ಹೆಗ್ಗವಾಡಿ, ಹಂಗಳ, ಶಿವಪುರ, ಕಲ್ಲಿಗೌಡನಹಳ್ಳಿ ಎನ್.ಜೆ.ವೈ. ಎಲಚಟ್ಟಿ, ಗೋಪಾಲ್ಪುರ ಎನ್.ಜೆ.ವೈ. ದೇವರಹಳ್ಳಿ, ಹೊನ್ನೆಗೌಡನಹಳ್ಳಿ, ಮಲ್ಲಯ್ಯನಪುರ ಮತ್ತು ಹೊಂಗಹಳ್ಳಿ ಐಪಿ, ಮುಂಟಿಪುರ ವಿದ್ಯುತ್ ವ್ಯತ್ಯಯವಾಗಲಿದೆ.