ನಗರದಲ್ಲಿ ಮರಾಠಿ ನಾಮಫಲಕಕ್ಕೆ ಕತ್ತರಿ ಹಾಕಿದ ಕನ್ನಡಿಗರು. ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನದ ಸಂದರ್ಭದಲ್ಲಿ ಕನ್ನಡಕ್ಕೆ ಸ್ಫೂರ್ತಿ ನೀಡಬೇಕಾದ ರಾಜಕಾರಣಿಗಳು ಮತ ಬ್ಯಾಂಕ್ ಗಾಗಿ ಮರಾಠಿ ಭಾಷೆಯಲ್ಲಿ ನಾಮಫಲಕ ಅಳವಡಿಸಿರುವುದಕ್ಕೆ ಕನ್ನಡ ಹೋರಾಟಗಾರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಚಳಿಗಾಲದ ಅಧಿವೇಶನಕ್ಕೆ ಸ್ವಾಗತ ಕೋರಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ಅನಿಲ್ ಬೆನಕೆ ಅವರು ಮರಾಠಿ ಭಾಷೆಯಲ್ಲಿ ನಾಮಫಲಕ ಅಳವಡಿಸಿದ್ದಕ್ಕೆ ಕಿತ್ತೂರು ಕರ್ನಾಟಕ ಸೇನೆಯ ಕಾರ್ಯಕರ್ತರು ಶನಿವಾರ ಆಕ್ರೋಶ ವ್ಯಕ್ತಪಡಿಸಿ ನಾಮಫಲಕಕ್ಕೆ ಕತ್ತರಿ ಹಾಕಿದ್ದಾರೆ