ಹಳಿಯಾಳ: ತಾಲ್ಲೂಕು ಆಡಳಿತ ಸೌಧದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ : ಶಾಸಕ ಆರ್.ವಿ.ದೇಶಪಾಂಡೆ ಭಾಗಿ
ಹಳಿಯಾಳ : ತಾಲೂಕಾ ಆಡಳಿತದ ಆಶ್ರಯದಡಿ ತಾಲೂಕು ಆಡಳಿತ ಸೌಧದಲ್ಲಿ ಶನಿವಾರ ಬೆಳಿಗ್ಗೆ 9.30 ಗಂಟೆಗೆ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯ್ತು. ತಾಯಿ ಭುವನೇಶ್ವರಿಯ ಭಾವಚಿತ್ರಕ್ಕೆ ಆರತಿಯನ್ನು ಬೆಳಗಿ ಪುಷ್ಪ ಗೌರವವನ್ನು ಸಲ್ಲಿಸಿ ಮಾತನಾಡಿದ ಶಾಸಕರಾದ ಆರ್.ವಿ. ದೇಶಪಾಂಡೆ ಅವರು ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಪರಂಪರೆಯ ಅಮೂಲ್ಯ ಬೆಳಕು ಚೆಲ್ಲಿದ ನಮ್ಮ ಕರುನಾಡು ನಮ್ಮ ಹೆಮ್ಮೆ ಮತ್ತು ನಮ್ಮ ಆತ್ಮಗೌರವ. ಅನೇಕ ಮಹನೀಯರ ತ್ಯಾಗ, ಪರಿಶ್ರಮ ಮತ್ತು ನಿಸ್ವಾರ್ಥ ಸೇವೆಯ ಫಲದಿಂದಾಗಿ ಕನ್ನಡ ನಾಡು ಸಮೃದ್ಧವಾಗಿದೆ. ನಮ್ಮ ನಾಡಿನ ಐತಿಹಾಸಿಕ ಪರಂಪರೆ, ಕನ್ನಡದ ಸುವಾಸನೆ ಮತ್ತು ಸಂಸ್ಕೃತಿಯ ಸೌಂದರ್ಯ ಹೊಸ ಪೀಳಿಗೆಗೆ ಪ್ರೇರಣೆಯಾಗಲಿ. ಕನ್ನಡದ ಕೀರ್ತಿ ವಿಶ್ವದ ಅಂಗಳದಲ್ಲಿ ನಿರಂತರವಾಗಿ ಅರಳಿ ಬೆಳೆಯಲಿ ಎಂದರು.