ಬೆಂಗಳೂರು ಉತ್ತರ: ಮೆಟ್ರೋ ಪಿಲ್ಲರ್ ಮೇಲೆ ಹತ್ತಿ ಕೂತ ಭೂಪ! ಜಾಲಹಳ್ಳಿಯಲ್ಲಿ ಜನ ಕಂಗಾಲು! ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಬಚಾವ್
ಜಾಲಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ವ್ಯಕ್ತಿ ಒಬ್ಬ ಹುಚ್ಚಾಟ ಮೆರೆದಿದ್ದಾನೆ. ಮೆಟ್ರೋ ಪಿಲ್ಲರ್ ಅನ್ನು ಹತ್ತಿ ಅದರೊಳಗಡೆ ಕೂತು ವಾಹನ ಸಂಚಾರವನ್ನು ನೋಡ್ತಾ ಇದ್ದಂತಹ ವಿಡಿಯೋ ವೈರಲ್ ಆಗಿದೆ. ಈ ರೀತಿಯ ವಿಲಕ್ಷಣ ವರ್ತನೆ ತೋರಿರುವುದು ಕೆಲಕಾಲ ಜನರಲ್ಲಿ ಆತಂಕವನ್ನು ಸೃಷ್ಟಿ ಮಾಡಿದ್ದು ಪಿಲ್ಲರ್ ಅನ್ನು ಯಾಕಪ್ಪ ಹತ್ತಿ ಕೂತಿದ್ದಾನೆ ಅನ್ನೋ ಆಶ್ಚರ್ಯವನ್ನು ಮೂಡಿಸಿತು.