ಯಲ್ಲಾಪುರ: ಮನೆಯಲ್ಲಿ ವಿದ್ಯುತಚಾಲಿತ ಮಜ್ಜಿಗೆ ಕಡಿಯುವ ಯಂತ್ರದಲ್ಲಿ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ವೃದ್ದರೊಬ್ಬರು ಮೃತಪಟ್ಟ ಘಟನೆ ತಾಲೂಕಿನ ಬಿಸಗೋಡದ ನಾಗರಖಾನದಲ್ಲಿ ಸಂಭವಿಸಿದೆ. ವಿಶ್ವೇಶ್ವರ ವೆಂಕಟರಮಣ ಭಟ್ (73) ಇವರು ಮನೆಯಲ್ಲಿ ವಿದ್ಯುತ್ ಚಾಲಿತ ಮಿಷನ್ ನಲ್ಲಿ ಮಜ್ಜಿಗೆ ಕಡೆಯುವಾಗ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಸ್ಥಳದಲ್ಲಿಯೇ ಬಿದ್ದು ಮೃತಪಟ್ಟಿದ್ದಾರೆ. ಈ ಸಾವಿನಲ್ಲಿ ಯಾವದೇ ಸಂಶಯವಿಲ್ಲವೆಂದು ಮೃತ ವ್ಯಕ್ತಿಯ ಮಗ ಗಣಪತಿ ವಿಶ್ವೇಶ್ವರ ಭಟ್ಟ ತಿಳಿಸಿರುವ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.