ಆಳಂದ ತಾಲೂಕಿನ ಕೆರಿ ಅಂಬಲಗಾ ಗ್ರಾಮದಲ್ಲಿ ದೇವರ ಮೂರ್ತಿಯನ್ನೆ ಕದ್ದು ಪರಾರಿಯಾಗಿದ್ದಾರೆ ಕಳ್ಳರು..ಗ್ರಾಮದ ಮಾಲಿಂಗೇಶ್ವರ ದೇವರ ಸುಮಾರು ಒಂದು ಕೆಜಿ ತೂಕದ ಬೆಳ್ಳಿ ಮೂರ್ತಿ ಕಳ್ಳತನ ಮಾಡಲಾಗಿದೆ. ಸ್ಥಳಕ್ಕೆ ಶ್ವಾನದಳ ಸೇರದಂತೆ ಪೋಲಿಸ್ ಅಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಇದು ಎರಡನೇ ಬಾರಿ ನಡೆಯುತ್ತಿರುವ ಘಟನೆ, ಕೂಡಲೇ ಆರೋಪಿಗಳನ್ನ ಬಂಧಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಗುರುವಾರ 11 ಗಂಟೆಗೆ ಆಗ್ರಹಿಸಿದ್ದಾರೆ.