ಕಲಬುರಗಿ : ಡಿಸೆಂಬರ್ 23 ರಂದು ಕಲಬುರಗಿ ನಗರದಲ್ಲಿ ವಿಶ್ವ ರೈತ ದಿನಾಚರಣೆ ಅಂಗವಾಗಿ ವಿವಿಧ ರೈತ ಸಂಘಟನೆಗಳಿಂದ ರೈತರ ಹಬ್ಬ ಹಾಗೂ ರಾಜ್ಯ ಮಟ್ಟದ ರೈತ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಹಿರಿಯ ರೈತ ಮುಖಂಡ ಕುರುಬರು ಶಾಂತಕುಮಾರ ಹೇಳಿದ್ದಾರೆ.. ಡಿ3 ರಂದು ಮಧ್ಯಾನ 1 ಗಂಟೆಗೆ ಕಲಬುರಗಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದಲ್ಲಿ ಅತಿವೃಷ್ಟಿಯಿಂದ ಸಾಕಷ್ಟು ಬೆಳೆ ಹಾನಿಯಾಗಿದ್ದು, ಎಕರೆಗೆ 25 ಸಾವಿರ ಪರಿಹಾರ, ನೀರಾವರಿ ಬೆಳೆ ಎಕರೆಗೆ 40 ಸಾವಿರ, ತೋಟಗಾರಿಕೆ ಬೆಳೆ ಎಕರೆಗೆ 60 ಸಾವಿರ ಪರಿಹಾರ ನೀಡಬೇಕೆಂದು ಕುರುಬರು ಶಾಂತಕುಮಾರ ಹೇಳಿದ್ದಾರೆ.