ರೋಣ: ಯಾ.ಸ ಹಡಗಲಿ ಬಳಿ ಕೊಚ್ಚಿ ಹೊಗಿದ್ದ ಆರೋಗ್ಯ ಇಲಾಖೆ ಸಿಬ್ಬಂದಿ ಶವವಾಗಿ ಪತ್ತೆ
Ron, Gadag | Sep 17, 2025 ಮಂಗಳವಾರ ಗದಗ ಜಿಲ್ಲೆಯ ರೋಣ ತಾಲೂಕಿನ ಯಾ.ಸಾ.ಹಡಗಲಿಯ ಮುಚ್ಚಣಕಿಯ ಹಳ್ಳದ ನೀರಿನಲ್ಲಿ ಬೈಕ್ ಸಮೇತ ಮೂವರು ಆರೋಗ್ಯ ಇಲಾಖೆಯ ಸಿಬ್ಬಂದಿ ಕೊಚ್ಚಿ ಹೋಗಿದ್ದರು. ಇದರಲ್ಲಿ ಪವಾಡ ಎಂಬಂತೆ ಇಬ್ಬರು ಬಚಾವ್ ಆಗಿದ್ದರು, ಓರ್ವ ಸಿಬ್ಬಂದಿ ನೀರಿನ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದರು. ಇಂದು ಬೆಳಿಗ್ಗೆ ಬಸಮ್ಮ ಗುರಿಕಾರ್ (35) ಶವ ಪತ್ತೆಯಾಗಿದೆ. ಮೃತ ಬಸಮ್ಮ ಬೆಳವಣಕಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಿರಿಯ ಮಹಿಳಾ ಆರೋಗ್ಯ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದಳು.