ಮಳವಳ್ಳಿ : ಮನೆಯ ಆವರಣಕ್ಕೆ ನುಗ್ಗಿರುವ ಚಿರತೆ ಮನೆ ಮುಂದೆ ಕಟ್ಟಿಹಾಕಿದ್ದ ಮೇಕೆಯನ್ನು ಹೊತ್ತೊಯ್ದು ಕೊಂದು ಹಾಕಿರುವ ಘಟನೆ ತಾಲ್ಲೂಕಿನ ಸಣ್ಣದದೊಡ್ಡಿ ಗ್ರಾಮದಲ್ಲಿ ಜರುಗಿದೆ. ಬುಧವಾರ ಬೆಳಗಿನ ಜಾವ 3 ಗಂಟೆ ಸಮಯದಲ್ಲಿ ಈ ಗ್ರಾಮದ ಲಕ್ಷ್ಮ,ಣ ಎಂಬುವರ ಮನೆ ಆವರಣಕ್ಕೆ ನುಗ್ಗಿರುವ ಚಿರತೆ ಮನೆ ಮುಂದೆ ಕಟ್ಟಿ ಹಾಕಿದ್ದ ಮೇಕೆ ಮೇಲೆ ದಾಳಿ ಮಾಡಿದ್ದು ಮೇಕೆ ಚೀರಾಟದಿಂದ ಎಚ್ಚೆತ್ತ ಮನೆಯ ವರು ಹೊರಬರುತ್ತಿದ್ದಂತೆ ಮೇಕೆ ಯನ್ನು ಹೊತ್ತೊಯ್ದಿತ್ತು ಎನ್ನಲಾಗಿದ ಬುಧವಾರ ಬೆಳಿಗ್ಗೆ 10.30 ರ ಸಮಯದಲ್ಲಿ ಮೇಕೆಗಾಗಿ ಹುಡುಕಾಟ ನಡೆಸುತ್ತಿರುವಾಗ ಗ್ರಾಮದ ಹೊರವಲಯದ ಬಂಡೆಯ ಕೊರಕಲಿನಲ್ಲಿ ಮೇಕೆಯ ಶವ ಪತ್ತೆಯಾಗಿದೆ.