ಕೊಳ್ಳೇಗಾಲ: ಶಿವನಸಮುದ್ರ ನಾಲೆಯಿಂದ ಆನೆ ರಕ್ಷಿಸಿದ ಸಿಬ್ಬಂದಿಗೆ ಪಟ್ಟಣದಲ್ಲಿ ಸಚಿವ ಈಶ್ವರ ಖಂಡ್ರೆ ಸನ್ಮಾನ
ಇತ್ತೀಚೆಗೆ ಶಿವನಸಮುದ್ರದ ಜಲವಿದ್ಯುತ್ ಗಾರದ ಜಲಾಶಯದ ಬಳಿಯ ನಾಲೆಯಲ್ಲಿ ಸಿಲುಕಿದ್ದ ಸಲಗವನ್ನು ಯಶಸ್ವಿಯಾಗಿ ರಕ್ಷಿಸಿದ ಅರಣ್ಯ ಸಿಬ್ಬಂದಿ ಮತ್ತು ಪಶುವೈದ್ಯರನ್ನು ಸಚಿವ ಈಶ್ವರ ಬಿ ಖಂಡ್ರೆ ಸನ್ಮಾನಿಸಿದರು. ಕೊಳ್ಳೆಗಾಲದ ಮಲೆ ಮಹದೇಶ್ವರ ವನ್ಯಜೀವಿಧಾಮ ಕಚೇರಿಯಲ್ಲಿ ಕಮಾಂಡ್ ಸೆಂಟರ್ ಉದ್ಘಾಟಿಸಿದ ಬಳಿಕ ಬುಧವಾರ ಸನ್ಮಾನಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಉತ್ತಮ ಕಾರ್ಯ ಮಾಡಿದ ಸಿಬ್ಬಂದಿ ಪ್ರಶಂಸೆಗೆ ಮತ್ತು ಸನ್ಮಾನಕ್ಕೆ ಅರ್ಹರಾಗುತ್ತಾರೆ. ಅದೇ ರೀತಿ ತಪ್ಪು ಮಾಡುವ ಅಧಿಕಾರಿಗಳ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆಯನ್ನೂ ನೀಡಿದರು.