ಚಾಮರಾಜನಗರ ತಾಲೂಕಿನ ಹೆಬ್ಬಸೂರು ಗ್ರಾಮದ ಶ್ರೀ ಶಂಕರ ಮಠಕ್ಕೆ ನಾಗಾಸಾಧುಗಳು ದಿಢೀರ್ ಭೇಟಿ ಕೊಟ್ಟು ಶಾರದಾಂಬೆ ಹಾಗೂ ಚಂದ್ರಮೌಳೇಶ್ವರನಿಗೆ ನಮಿಸಿದರು. ಮಠದಲ್ಲಿರುವ ಶಾರದಾಂಬೆ, ಗಣಪತಿ, ಸುಬ್ರಹ್ಮಣ್ಯ, ಆದಿಶಂಕರಾಚಾರ್ಯ, ಸೀತಾ ರಾಮ ಲಕ್ಷ್ಮಣ ಸಹಿತ ವಿಗ್ರಹಗಳಿಗೆ ನಡೆದ ವಿಶೇಷ ಪೂಜೆಯಲ್ಲಿ ಭಾಗಿಯಾದರು. 9 ಮಂದಿ ನಾಗಾಸಾಧುಗಳು ತೀರ್ಥಯಾತ್ರೆ ಕೈಗೊಂಡಿದ್ದು ಮಾರ್ಗಮಧ್ಯದಲ್ಲಿ ಹೆಬ್ಬಸೂರಿಗೂ ಭೇಟಿ ನೀಡಿದ್ದರು, ಬಂದಂತಹ ಭಕ್ತರಿಗೆ ಆಶೀರ್ವದಿಸಿದರು. ಮಠದ ಆಡಳಿತಾಧಿಕಾರಿ ಶ್ರೀಧರ್, ವಿಪ್ರ ಮುಖಂಡ ನಾಗರಾಜು ಸೇರಿ ಇತರರು ಈ ವೇಳೆ ಇದ್ದರು