ಬೆಂಗಳೂರು ಉತ್ತರ: ಧನ್ವೀರ್ ಗೆ CCB ಡ್ರಿಲ್! ಲಾಕ್ ಆಗ್ತಾರಾ ದರ್ಶನ್ ಆಪ್ತ! ಏನಿದು ವಿಡಿಯೋ ರಹಸ್ಯ
ಪರಪ್ಪನ ಅಗ್ರಹಾರ ಜೈಲಿನ ಆರೋಪಿಗಳು ಮೊಬೈಲ್ ವಿಡಿಯೋ ವೈರಲ್ ಆಗಿದ್ದು ಈ ವಿಡಿಯೋಗೆ ಧನ್ವೀರ್ ಗೆ ಸಂಬಂಧ ಇದ್ಯಾ ಅನ್ನೋ ಅನುಮಾನ ವ್ಯಕ್ತ ಆಗಿದೆ. ದರ್ಶನ್ ಗೆ ಸವಲತ್ತು ಕೊಡದ ಹಿನ್ನೆಲೆ ಈ ರೀತಿ ಕೆಲವು ವಿಡಿಯೋ ವೈರಲ್ ಮಾಡಲಾಗಿದೆ ಎನ್ನಲಾಗಿದೆ. CCB ಅಧಿಕಾರಿಗಳು ಸಾಕಷ್ಟು ಪ್ರಶ್ನೆ ಕೇಳಿ ಧನ್ವೀರ್ ಗೆ ವಿಚಾರಣೆ ಮಾಡಿದ್ದಾರೆ. ಮಾತ್ರವಲ್ಲದೇ ಸಾಕಷ್ಟು ಆಯಾಮಗಳಲ್ಲಿ ಚರ್ಚೆ ಆಗುತ್ತಿದ್ದು ಧನ್ವೀರ್ ಗೆ ಕಾನೂನು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.