ಬೆಂಗಳೂರು ದಕ್ಷಿಣ: ಆಟೋ ಚಾಲಕ & ಯುವತಿ ಕಿರಿಕ್! ಚಾಲಕನ ಮೇಲೆ ಹಲ್ಲೆ! ಮೊಬೈಲ್ ಕಸಿದು ಹಲ್ಲೆ! ಹುಳಿಮಾವಿನಲ್ಲಿ ಆಟೋಗೆ ತುಳಿದ ಯುವತಿ
ಪಿಕ್ ಅಪ್ ವಿಚಾರಕ್ಕೆ ಆಟೋ ಚಾಲಕ ಮತ್ತು ಯುವತಿಯ ಮಧ್ಯೆ ಕಿರಿಕ ನಡೆದಿದೆ. ಹೇಳಿದ ಜಾಗಕ್ಕೆ ಬರಲಿಲ್ಲ ಅಂತ ಯುವತಿ ಆಟೋಗೆ ಒದ್ದಿರುವಂತಹ ಘಟನೆ ಬೆಳಕಿಗೆ ಬಂದಿದೆ. ಈ ಹಿನ್ನೆಲೆ ಮೊಬೈಲ್ನಲ್ಲಿ ವಿಡಿಯೋ ರೆಕಾರ್ಡ್ ಮಾಡಿಕೊಳ್ಳುತ್ತಿದ್ದಾಗ ಯುವತಿಯ ಜೊತೆಗೆ ಇದ್ದಂತಹ ಯುವಕ ಆಟೋ ಚಾಲಕನ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾರೆ. ಹುಳಿಮಾವು ಪೊಲೀಸ್ ಠಾಣೆಯಲ್ಲಿ ಎನ್ ಸಿ ಆರ್ ದಾಖಲಾಗಿದ್ದು ಘಟನೆಯ ವಿಡಿಯೋ ವೈರಲ್ ಆಗಿದೆ