ಚಾಮರಾಜನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹಂಗಳ ಗ್ರಾಮದ ಆನಂದ್ ಮಾತನಾಡಿ ಫೆ.3. 2025 ರಂದು ಡಾಕ್ಟರ್ ನಿರ್ಲಕ್ಷ್ಯದಿಂದ ನನ್ನ ಮಗು ಸಾವನ್ನಪ್ಪಿದೆ. ಬೊಮ್ಮಲಪುರ ಗ್ರಾಮದಲ್ಲಿರುವ ಆರೋಗ್ಯ ಕೇಂದ್ರದಲ್ಲಿ ನನ್ನ ಮಗುವಿಗೆ ಕಿವಿ ಚುಚ್ಚಿಸಲು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೇ. ಅಲ್ಲಿದ್ದ ಡಾ.ನಾಗರಾಜು ಅವರು ನೀಡಿದ ಅರವಳಿಕೆ ಚುಚ್ಚು ಮದ್ದು ನೀಡಿದ ಹಿನ್ನೆಲೆ ನನ್ನ ಮಗು ಸಾವನ್ನಪ್ಪಿದ್ದು ವೈದ್ಯರ ನಿರ್ಲಕ್ಷ್ಯ ಈ ಘಟನೆ ನಡೆದಿದೆ. ಆರು ತಿಂಗಳ ಬಳಿಕ ಮರಣೋತ್ತರ ಪರೀಕ್ಷೆಯ ವರದಿ ಬಂದ ಮೇಲೆ ನಮಗೆ ಗೋತ್ತಾಗಿದೆ ಎಂದರು