ಹುಬ್ಬಳ್ಳಿ: ಹಾವೇರಿ ಲೋಕಾಯುಕ್ತ ಘಟಕದಲ್ಲಿ ಇನ್ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪಂಚಾಕ್ಷರಿ ಸಾಲಿಮಠ ಅವರ ಸಾವು ಆಘಾತ ತಂದಿದೆ ಎಂದು ಹುಧಾ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್ ತಿಳಿಸಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಸಂಜೆ ಅಣ್ಣಿಗೇರಿ ಬಳಿ ಕಾರ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಈಗ ಅವರ ಪಾರ್ಥಿವ ಶರೀರವನ್ನು ಹುಬ್ಬಳ್ಳಿ ಕಿಮ್ಸ್ ದಿಂದ ಬೆಳಗಾವಿಯ ಅವರ ತವರೂರಾದ ಮುರಗೋಡಗೆ ತಗೊಂಡು ಹೋಗಲಾಗಿದೆ. ಸಾಲಿಮಠ ಅವರು ಹುಧಾ ಸೇರಿದಂತೆ ವಿವಿಧೆಡೆ ಕರ್ತವ್ಯ ನಿರ್ವಹಿಸಿದ್ದಾರೆ. ಅವರ ಸಾವಿನಿಂದ ಅವರ ಕುಟುಂಬ, ಪೊಲೀಸ್ ಇಲಾಖೆ ಹಾಗೂ ವೈಯಕ್ತಿಕ ನೋವುಂಟು ಮಾಡಿದೆ ಎಂದರು.