ಯಲ್ಲಾಪುರ: ಹುಲಗೋಡ ಸಮೀಪ ಮರಕ್ಕೆ ಬೈಕ್ ಡಿಕ್ಕಿ ಹೊಡೆದು ಸವಾರ ಸಾವು
ಯಲ್ಲಾಪುರ : ತಾಲೂಕಿನ ಹುಲಗೋಡ ಸಮೀಪ ಮರಕ್ಕೆ ಬೈಕ್ ಡಿಕ್ಕಿ ಹೊಡೆದು ಸವಾರ ಮೃತ ಪಟ್ಟ ಘಟನೆ ನಡೆದಿದೆ. ಬೈಕ್ ಸವಾರ ಮುಂಡಗೋಡ ತಾಲೂಕಿನ ಉಗ್ಗಿನಕೇರಿಯ 24 ವರ್ಷದ ಪೇದ್ರು ಸೆಬಾಸ್ಟಿನ್ ಕಾಮೆಲ್ ಸಿದ್ದಿ ಎಂಬಾತ ತನ್ನ ಬೈಕ್ ಅನ್ನು ಹುಲಗೋಡ ಕಡೆಯಿಂದ ಕಿರವತ್ತಿ ಕಡೆಗೆ ಅತೀ ವೇಗ ಹಾಗೂ ನಿಷ್ಕಾಳಜಿಯಿಂದ ಚಲಾಯಿಸಿಕೊಂಡುಬಂದು, ಹುಲಗೋಡ ಹತ್ತಿರ ಬೈಕ್ ಮರಕ್ಕೆ ಡಿಕ್ಕಿಯಾದ ಪರಿಣಾಮ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಈ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.