ಬೆಂಗಳೂರು ಉತ್ತರ: ದೆಹಲಿ ಬಾಂಬ್ ಬ್ಲಾಸ್ಟ್; ಪ್ರಧಾನಿ ಘಟನೆಯ ಜವಾಬ್ದಾರಿ ಹೊರಬೇಕು: ನಗರದಲ್ಲಿ ಮಧುಬಂಗಾರಪ್ಪ
ದೆಹಲಿ ಬಾಂಬ್ ಬ್ಲಾಸ್ಟ್ ವಿಚಾರಕ್ಕೆ ಸಂಬಂಧಿಸಿ ವಿಧಾನಸೌಧದ ಬಳಿ ಮಂಗಳವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಮಾತನಾಡಿದ ಸಚಿವ ಮಧು ಬಂಗಾರಪ್ಪ ಅವರು, ಇಂತಹ ಸಂದರ್ಭದಲ್ಲಿ ನಾವು ಒಟ್ಟಾಗಿರಬೇಕು. ಮಡಿದವರಿಗೆ ಸಂತಾಪ, ಗಾಯಾಳುಗಳು ಬೇಗ ಗುಣಮುಖರಾಗಲಿ. ಪುಲ್ವಾಮಾ, ಪೆಹಲ್ಗಾಮ್ ವೈಪಲ್ಯವಾಯ್ತು. ನೂನ್ಯತೆ ಯಾರದ್ದೆ ಇದ್ರು ಒಪ್ಪಿಕೊಳ್ಳಲೇಬೇಕು. ಈ ಬ್ಲಾಸ್ಟ್ ಬಿಹಾರ ಚುನಾವಣೆಗೆ ಏನು ಸಂದೇಶ, ಆಪರೇಷನ್ ಸಿಂಧೂರ್ ಯಾಕೆ ಆಯ್ತು?ಅದಕ್ಕೂ ಮುಂಚೆ ಏನಾಯ್ತು ಅಂತ ನೋಡಬೇಕಲ್ಲ. ಯಾಕೆ ಯಾರು ಜವಾಬ್ದಾರಿ ತೆಗೆದುಕೊಳ್ಳಲಿಲ್ಲ, ಪ್ರಧಾನಿ ಯಾಕೆ ಜವಾಬ್ದಾರಿ ತೆಗೆದುಕೊಳ್ಳಲ್ಲ, ನೇರವಾಗಿ ಪ್ರಧಾನಿ ಈ ಘಟನೆ ಜವಾಬ್ದಾರಿ ಹೊರಬೇಕು ಎಂದರು.