ಹಿರಿಯೂರು: ಜಾತಿಗಣತಿಯಲ್ಲಿ ಕುಂಚಿಟಿಗ ಎಂದು ಬರೆಸಿ;ನಗರದಲ್ಲಿ ಎಲೆರಾಂಪುರದ ಶ್ರೀ ಹನುಮಂತಪ್ಪನಾಥ ಸ್ವಾಮಿ ಒತ್ತಾಯ
ರಾಜ್ಯ ಮತ್ತು ಕೇಂದ್ರ ಸರ್ಕಾರ ನಡೆಸುವ ಜಾತಿ ಜನಗಣತಿಯಲ್ಲಿ ಕುಂಚಿಟಿಗ ಎಂದು ನಮೂದಿಸಬೇಕು ಎಂಬುದಾಗಿ ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದ ಶ್ರೀಹನುಮಂತನಾಥ ಸ್ವಾಮೀಜಿ ಅವರು ಹೇಳಿದರು. ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ನಡೆಸಲಾದ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಕರ್ನಾಟಕ ರಾಜ್ಯದ ಬಯಲುಸೀಮೆ, ಮಲೆನಾಡು, ಕರಾವಳಿ, ಕಲ್ಯಾಣಕರ್ನಾಟಕ ಸೇರಿದಂತೆ 19ಜಿಲ್ಲೆಗಳು, 47ತಾಲ್ಲೂಕುಗಳಲ್ಲಿ 30ಲಕ್ಷಕ್ಕೂ ಅತ್ಯಧಿಕ ಸಂಖ್ಯೆಯಲ್ಲಿರುವ ಸಮಸ್ತ ಕುಂಚಿಟಿಗರು ಒಗ್ಗಟ್ಟು ಪ್ರದರ್ಶನ ಮಾಡಬೇಕು ಎಂದರು.