ಹೊನ್ನಾವರ: ಗುಂಡಿಬೈಲ್ ದಲ್ಲಿ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ
ಹೊನ್ನಾವರ : ತಾಲೂಕಿನ ಗುಂಡಿಬೈಲ್ ಗ್ರಾಮದಲ್ಲಿ ಯುವತಿ ಯೊಬ್ಬಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.ಗಾಯತ್ರಿ ಕೇಶವ ಗೌಡ(25) ಆತ್ಮಹತ್ಯೆ ಮಾಡಿಕೊಂಡ ಯುವತಿಯಾಗಿದ್ದಾಳೆ.ಯುವತಿಯ ಆತ್ಮಹತ್ಯೆಗೆ ಕಾರಣ ಇದುವರೆಗೂ ತಿಳಿದು ಬಂದಿಲ್ಲ. ಆಕೆ ಬಾವಿಗೆ ಹಾರುವ ಮುನ್ನ ಯುವಕನೊಬ್ಬನಿಗೆ ಕರೆ ಮಾಡಿದ್ದಳು ಎಂದು ಮಾಹಿತಿ ಲಭ್ಯ ವಾಗಿದೆ.ಪೊಲೀಸ್ ರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆತ್ಮಹತ್ಯೆ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಹೊನ್ನಾವರಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.