ಹುಬ್ಬಳ್ಳಿ: ಟ್ರಾಫಿಕ್ ಪೊಲೀಸರು ಬೈಕ್ ಪರಿಶೀಲನೆ ಮಾಡುವಾಗ, ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ಬೈಕ್ ಸವಾರನೊಬ್ಬನ ಮೇಲೆ ಬರೋಬ್ಬರಿ 44 ಕೇಸ್ ಬಿದ್ದಿದ್ದನ್ನು ಕಂಡು ಪೊಲೀಸರು ಶಾಕ್ ಆಗಿದ್ದು, ಕೂಡಲೇ ಎಲ್ಲ ಕೇಸ್ಗಳನ್ನು ದಂಡ ತುಂಬುವಂತೆ ಹೇಳಿದಾಗ, ಬೈಕ್ ಮಾಲೀಕ 44 ಕೇಸ್ನ 11,750 ದಂಡವನ್ನು ತುಂಬಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಕೃಷ್ಣ ಅಗಸರ ಅವರಿಗೆ ಸೇರಿದ ಬೈಕ್ ಮೇಲೆ 44 ಕೇಸ್ ದಾಖಲಾಗಿತ್ತು, ಎಲ್ಲ ದಂಡದ ಮೇಲೆ 50% ರಿಯಾಯಿತಿ ನೀಡಿದ ಹಿನ್ನೆಲೆಯಲ್ಲಿ, ಬೈಕ್ ಮಾಲೀಕ 44 ಕೇಸ್ನ 11,750 ರೂ. ದಂಡವನ್ನು ತುಂಬಿದ್ದಾರೆ. ಪೂರ್ವ ಸಂಚಾರಿ ಪೊಲೀಸ್ ಠಾಣೆಯ ಎಎಸ್ಐ ಸುಭಾಷ್ ದೊಡ್ಡಮನಿ, ಪೊಲೀಸ್ ಗೌಡರ್, ಬಡಿಗೇರ ಅವರು ದಂಡವನ್ನು ತುಂಬಿಸಿಕೊಂಡಿದ್ದಾರೆ.