ಹಸು ಬೇಟೆಯಾಡಲು ಬಂದಂತಹ ಚಿರತೆಯನ್ನು ಕಂಡ ನಾಯಿಗಳು ಬೊಗಳಿ ಪೇರಿ ಕೀಳಿಸಿದ ಘಟನೆ ಹನೂರು ತಾಲೂಕಿನ ಕಾಂಚಳ್ಳಿ ಗ್ರಾಮದ ತೋಟದ ಮನೆಯಲ್ಲಿ ನಡೆದಿದೆ. ಕಾಂಚಳ್ಳಿ ಗ್ರಾಮದ ತೋಟದ ವೆಂಕಟಾಚಲ ಎಂಬುವವರ ತೋಟದಲ್ಲಿ ಈ ಘಟನೆ ನಡೆದಿದ್ದು ಶ್ವಾನಗಳ ಬೊಗಳುವಿಕೆಯಿಂದ ಹಸು ಪಾರಾಗಿದೆ ಎಂದು ವೆಂಕಟಾಚಲ ತಿಳಿಸಿದ್ದಾರೆ. ಚಿರತೆ ಬಂದ ವಿಚಾರ ತಿಳಿದು ಸ್ಥಳೀಯರಿಗೆ ಭಯದ ವಾತಾವರಣ ನಿರ್ಮಾಣವಾಗಿದೆ. ಚಿರತೆ ಸೆರೆ ಹಿಡಿಯಬೇಕೆಂದು ಸ್ಥಳೀಯರು ಒತ್ತಾಯಿಸಿದದ್ದಾರೆ.