ಚಾಮರಾಜನಗರ ತಾಲ್ಲೂಕಿನ ಬೂದಿತಿಟ್ಟು ಕ್ರಾಸ್ ಸಮೀಪ ಕಾರು ಮತ್ತು ಬೈಕ್ ನಡುವೆ ರಸ್ತೆ ಅಪಘಾತ ಸಂಭವಿಸಿ ಬೈಕ್ ಸವಾರರಿಗೆ ಪೆಟ್ಟಾಗಿರುವ ಘಟನೆ ನಡೆದಿದೆ. ಯಳಂದೂರಿನ ಬೂದಿತಿಟ್ಟು ರಸ್ತೆಯಲ್ಲಿ ಸಂಚಾರ ಮಾಡುತ್ತಿದ್ದ ಸೂಜುಕಿ ಸ್ವಿಫ್ಟ್ ಕಾರು (ಕೆಎ 53 ಎನ್ 4510) ಮತ್ತು ಹೀರೋ ಬೈಕ್ (ಕೆಎ 10 ಇಎಚ್ 5639) ನಡುವೆ ಗುದ್ದಿಕೊಳ್ಳುವ ಸಂಭವ ನಡೆದಿದೆ. ಈ ಅಪಘಾತದಲ್ಲಿ ಬೈಕ್ ಸವಾರರು ಗಾಯಗೊಂಡಿದ್ದು, ಸ್ಥಳೀಯರು ತಕ್ಷಣವೇ ಅವರನ್ನು ಆಂಬುಲೆನ್ಸ್ ಮೂಲಕ ಸಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ಕಳುಹಿಸಿದ್ದಾರೆ.