ಕಲಬುರಗಿ : ಇದುವರೆಗೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ವತಿಯಿಂದ ₹1626 ಕೋಟಿ ಖರ್ಚು ಮಾಡಲಾಗಿದೆ.. 2025 ರ ಅಂತ್ಯಕ್ಕೆ ₹4000 ಕೋಟಿ ಖರ್ಚು ಮಾಡಲು ನಿರ್ಧರಿಸಲಾಗಿದೆ ಅಂತಾ ಮಂಡಳಿ ಅಧ್ಯಕ್ಷ ಡಾ ಅಜಯ್ಸಿಂಗ್ ಹೇಳಿದ್ದಾರೆ.. ಡಿ6 ರಂದು ಮಧ್ಯಾನ 2 ಗಂಟೆಗೆ ಕಲಬುರಗಿಯಲ್ಲಿ ಮಾತನಾಡಿದ ಅವರು, ಅಕ್ಷರ ಆವಿಷ್ಕಾರ ಯೋಜನೆಯಡಿ ಕ ಕ ಭಾಗದಲ್ಲಿ 300 ಕೆಪಿಎಸ್(ಕರ್ನಾಟಕ ಪಬ್ಲಿಕ್ ಶಾಲೆ) ತೆರಯಲು ಹಾಗೂ ಕ ಕ ಭಾಗದ ಎಲ್ಲಾ ತಾಲೂಕ ಕೇಂದ್ರಗಳಲ್ಲಿ ಪ್ರಜಾಸೌಧ ನಿರ್ಮಾಣ ಗುರಿ ಹೊಂದಲಾಗಿದೆ ಅಂತಾ ಡಾ ಅಜಯ್ಸಿಂಗ್ ಹೇಳಿದ್ದಾರೆ.