ಮುತಗಾ ಗ್ರಾಮದಲ್ಲಿ ನೂತನ ಶ್ರೀ ಸಾಯಿ ಮಂದಿರ ಕಟ್ಟಡದ ಉದ್ಘಾಟಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು. ಮುತಗಾ ಗ್ರಾಮದ ಸಾಯಿ ನಗರ, ಪೊಲೀಸ್ ಕಾಲೋನಿಯಲ್ಲಿ ಸುಮಾರು 20 ಲಕ್ಷ ರೂ,ಗಳ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ನೂತನ ಶ್ರೀ ಸಾಯಿ ಮಂದಿರ ಕಟ್ಟಡವನ್ನು ಶುಕ್ರವಾರ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಉದ್ಘಾಟಿಸಿದರು ಈ ಸಂದರ್ಭದಲ್ಲಿ ಮಾತನಾಡಿದ ಅವರು. ಸಾಯಿಬಾಬಾ ಅವರ ತತ್ವಗಳು ಸಮನ್ವಯತೆ ಮತ್ತು ಮಾನವೀಯ ಮೌಲ್ಯಗಳ ಸಂಕೇತವಾಗಿದ್ದು, ಈ ಮಂದಿರವು ಕೇವಲ ಧಾರ್ಮಿಕ ಕೇಂದ್ರವಾಗಿರದೆ, ಸಮಾಜದಲ್ಲಿ ಶಾಂತಿ, ಪ್ರೀತಿ ಮತ್ತು ಸಹಬಾಳ್ವೆಯನ್ನು ಉತ್ತೇಜಿಸುವ ಸ್ಥಳವಾಗಬೇಕು ಎಂದು ಹೇಳಿದರು