ಹಳಿಯಾಳ : ಕಳೆದ 26 ವರ್ಷಗಳಿಂದ ಹಳಿಯಾಳ ತಾಲೂಕಿನ ಹವಗಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಉತ್ಪಾದನಾ ಘಟಕವಾದ ಮಾರುತಿ ಉದ್ಯಮ್ಸ್ ಇದರ ಸರ್ವತೋಮುಖ ನಿರ್ವಹಣೆಗಾಗಿ ಭಾರತೀಯ ರಾಜ್ಯ ಕೈಗಾರಿಕಾ ಅಭಿವೃದ್ಧಿ ಮತ್ತು ಹೂಡಿಕೆ ನಿಗಮದಿಂದ ರಾಷ್ಟ್ರ ಪ್ರಶಸ್ತಿಯ ಗೌರವ ಪ್ರಾಪ್ತವಾಗಿದೆ. ಈ ಬಗ್ಗೆ ಇಂದು ಶನಿವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಮಾಧ್ಯಮಕ್ಕೆ ಮಾಹಿತಿ ಲಭ್ಯವಾಗಿದೆ. ಕಳೆದ 26 ವರ್ಷಗಳ ಹಿಂದೆ ಪಟ್ಟಾಭಿರಾಮ.ಆರ್.ಕಲ್ಕೂರ, ರಮೇಶ ಉ.ನಾಯಕ್, ರಾಧಾಕೃಷ್ಣ ಎಸ್.ನಾಯಕ ಮತ್ತು ರಾಜೇಶ್ ನಾಯಕ್ ಅವರು ಸೇರಿಕೊಂಡು ಆರಂಭಿಸಿರುವ ಮಾರುತಿ ಉದ್ಯಮ್ಸ್ ತನ್ನ ಉತ್ಕೃಷ್ಟ ಗುಣಮಟ್ಟದ ಸೇವೆ, ಉತ್ಪಾದನಾ ಚಟುವಟಿಕೆ ಹಾಗೂ ಹೂಡಿಕೆ ಮತ್ತು ಉದ್ಯೋಗದ ಆಸರೆಯನ್ನು ನೀಡಿ ರಾಷ್ಟ್ರದಾದ್ಯಂತ ತನ್ನದೇ ಆದ ಛಾಪನ್ನು ಮ