ಆಳಂದ ತಾಲೂಕಿನ ಎಲೆನಾವದಾ ಮತ್ತು ದುತ್ತರಗಾಂವಗಳಲ್ಲಿ ಒಟ್ಟು 73 ಲಕ್ಷ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಬಿಆರ್ ಪಾಟೀಲ್ ಗುದ್ದಲಿ ಪೂಜೆ ನೆರವೇರಿಸಿದರು ಎಂದು ಬುಧವಾರ 5 ಗಂಟೆಗೆ ಸ್ಥಳಿಯರು ಮಾಹಿತಿ ನೀಡಿದ್ದಾರೆ. ಎಲೆನಾವದಗಿ ಗ್ರಾಮದಲ್ಲಿ ಅಂದಾಜು 22 ಲಕ್ಷ ರೂ. ವೆಚ್ಚದ ಶ್ರೀ ಸಿದ್ದರಾಮೇಶ್ವರ ಹಿರೇಮಠ ಸಮುದಾಯ ಭವನ ಮತ್ತು ದುತ್ತರಗಾಂವ ಗ್ರಾಮದಲ್ಲಿ ದಲ್ಲಿ 51 ಲಕ್ಷ ರೂ. ವೆಚ್ಚದ ಕನಕ ಭವನ ನಿರ್ಮಾಣಕ್ಕೆ ಶಾಸಕರು ಚಾಲನೆ ನೀಡಿದರು. ಕಾರ್ಯಕ್ರಮಗಳಲ್ಲಿ ಪೂಜ್ಯ ಸಿದ್ದೇಶ್ವರ ಶಿವಾಚಾರ್ಯರು, ಗ್ರಾಮ ಪಂಚಾಯತ್ ಸದಸ್ಯರು, ಲೋಕೋಪಯೋಗಿ ಇಲಾಖಾಧಿಕಾರಿಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದರು.