ದಾಂಡೇಲಿ: ನಿರ್ಮಲನಗರದಲ್ಲಿ ನಾಯಿಯ ಬಾಯಿಗೆ ಆಹಾರವಾಗುತ್ತಿದ್ದ ಹಾರ್ನ್ ಬಿಲ್ ಪಕ್ಷಿಯನ್ನು ಬದುಕಿಸಿದ ಪೊಲೀಸಪ್ಪ
ದಾಂಡೇಲಿ : ನಿರ್ಮಲನಗರದಲ್ಲಿ ಮರದಿಂದ ಆಯತಪ್ಪಿ ಬಿದ್ದು, ಇನ್ನೇನೂ ನಾಯಿಗೆ ಆಹಾರವಾಗಬೇಕೆನ್ನುವಷ್ಟರೊಳಗೆ ಸ್ಥಳೀಯರ ಸಹಕಾರದಲ್ಲಿ ಹಾರ್ನ್ ಬಿಲ್ ಪಕ್ಷಿಯನ್ನು ದಾಂಡೇಲಿ ನಗರ ಠಾಣೆಯ ಹವಾಲ್ದಾರ್ ಮಹದೇವ ಬಳೆಗಾರ ಅವರು ರಕ್ಷಿಸುವ ಮೂಲಕ ವನ್ಯ ಕಾಳಜಿಯನ್ನು ಮೆರೆದಿದ್ದಾರೆ. ಬುಧವಾರ ಸಂಜೆ ಐದುವರೆ ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ನಿರ್ಮಲ ನಗರದಲ್ಲಿ ಮರದಿಂದ ಆಯತಪ್ಪಿ ಬಿದ್ದ ಹಾರ್ನ್ ಬಿಲ್ ಹಕ್ಕಿಯನ್ನು ಅಲ್ಲೇ ಇದ್ದ ಬೀದಿ ನಾಯಿಗಳು ಇನ್ನೇನೂ ತಿನ್ನಬೇಕೆಂದು ಹೊಂಚು ಹಾಕಿದ್ದವು. ಇದನ್ನು ಗಮನಿಸಿದ ಅಲ್ಲೇ ಇದ್ದ ನಗರ ಠಾಣೆಯ ಹವಾಲ್ದಾರ್ ಮಹಾದೇವ ಬಳೆಗಾರ ಅವರು ಸ್ಥಳೀಯರಾದ ಅನಿಲ್, ಶಿವಪ್ಪ ಬಳ್ಳಾರಿ, ಸುಮಿತ್ ಶೇರಖಾನೆ, ವಿನಯ ಕುಂದರಗಿ, ಆಶೀರ್ವಾದ ಅವರ ಸಹಕಾರದಲ್ಲಿ ಹಾರ್ನಬಿಲ್ ಪಕ್ಷಿಯನ್ಮು ರಕ್ಷಿಸಲಾಯ್ತು.