ಮಳವಳ್ಳಿ : ಸುತ್ತೂರಿನ ಆದಿ ಜಗದ್ಗುರು ಶ್ರೀ ಶಿವರಾತ್ರಿ ಶಿವ ಯೋಗಿಗಳರವರ 1066ನೇ ಜಯಂತಿ ಮಹೋತ್ಸವದ ಅಂಗ ವಾಗಿ ಡಿ.17 ರಂದು ರಾಷ್ಟ್ರಪತಿ ಗಳು ಮಳವಳ್ಳಿ ಪಟ್ಟಣಕ್ಕೆ ಅಗಮಿ ಸಲಿದ್ದಾರೆಂದು ಶಾಸಕರು ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರು, ಜಯಂತಿ ಮಹೋತ್ಸವದ ಸ್ವಾಗತ ಸಮಿತಿ ಅಧ್ಯಕ್ಷರಾದ ಪಿ. ಎಂ. ನರೇಂದ್ರಸ್ವಾಮಿ ತಿಳಿಸಿದರು. ಮಳವಳ್ಳಿ ಪಟ್ಟಣದ ತಾ ಪಂ ಕಛೇರಿಯಲ್ಲಿ ಜಯಂತಿ ಮಹೋತ್ಸವದ ಕಾರ್ಯಕ್ರಮಗಳ ಕುರಿತು ಶನಿವಾರ ಸಾಯಂಕಾಲ 5.30 ರಸಮಯದಲ್ಲಿ ಸುದ್ದಿಗಾರ ರಿಗೆ ಮಾಹಿತಿ ನೀಡಿದ ಅವರು ಸುತ್ತೂರು ಕ್ಷೇತ್ರದಿಂದ ಅದಿ ಜಗದ್ಗುರುಗಳ ಉತ್ಸವ ಮೂರ್ತಿಯನ್ನು ಡಿ.16ರಂದು ಮಂಗಳವಾರ ಬರಮಾಡಿಕೊಳ್ಳ ಲಾಗುವುದು ಎಂದರು.