ರಾಯಚೂರು ಜಿಲ್ಲಾಯಾದ್ಯಂತ ಕಾರ್ತಿಕ ಪೌರ್ಣಿಮೆ, ಗೌರಿ ಹುಣ್ಣಿಮೆ ಹಿನ್ನೆಲೆಯಲ್ಲಿ ಮನೆ ಮನೆಗಳಲ್ಲಿ ವಿಶೇಷವಾಗಿ ತುಳಸಿ ಮತ್ತು ಗೌರಿ ಪೂಜೆ ಸಲ್ಲಿಸಿದ್ದಾರೆ. ಮಹಿಳೆಯರು ಬೆಳಗ್ಗೆಯಿಂದಲೇ ಗೌರಿ ಪೂಜೆಗಾಗಿ ವಿವಿಧ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡು, ಸಂಜೆ ವೇಳೆಗೆ ಮಣ್ಣಿನ ಗೌರಿ ಮೂರ್ತಿ ಮತ್ತು ಬೆಳ್ಳಿಯ ಗೌರಿ ಮೂರ್ತಿಯನ್ನು ಇಟ್ಟು ವಿಶೇಷವಾಗಿ ಪುಷ್ಪಲಂಕಾರ ಮಾಡಿ, ಫಲಗಳನ್ನು ಅರ್ಪಿಸಿ, ಪೂಜೆ ಸಲ್ಲಿಸಿ ನಂತರ ಪಟಾಕಿ ಸಿಡಿಸುವ ಮೂಲಕ ಗೌರಿ ಹುಣ್ಣಿಮೆಯನ್ನು ಆಚರಿಸಿದರು.