ಕೊಳ್ಳೇಗಾಲ ತಾಲೂಕಿನ ಜಾಗೇರಿ ಹಳೇ ಕೋಟೆ ಅರಣ್ಯ ಪ್ರದೇಶದಲ್ಲಿ ಅನುಮಾನಸ್ಪದವಾಗಿ 11 ಮೇಕೆ ಮರಿಗಳು ಮೃತಪಟ್ಟ ಘಟನೆ ಶನಿವಾರ ನಡೆದಿದೆ. ಹಳೇ ಕೋಟೆ ನಿವಾಸಿ ಫ್ರಾನ್ಸಿಸ್ ಎಂಬುವರಿಗೆ ಸೇರಿದ ಮೇಕೆ ಮರಿಗಳು ಇವಾಗಿದ್ದು, ಎಂದಿನಂತೆ ಮೇವು ಮೇಯಲು ಬಿಟ್ಟಿದ್ದ ಮೇಕೆ ಮರಿಗಳು ಅರಣ್ಯ ವ್ಯಾಪ್ತಿಗೆ ಸೇರಿದ ಹಳ್ಳ ವೊಂದರ ಬಳಿ ತೆರಳಿದೆ. ಸಂಜೆ ಹೊತ್ತಿನಲ್ಲಿ ಸತ್ತು ಬಿದಿದ್ದು ಇದನ್ನು ನೋಡಿದ ಮೇಕೆ ಮರಿಗಳ ಮಾಲೀಕ ಫ್ರಾನ್ಸಿಸ್ ಮಗ ಗಾಬರಿಗೊಂಡು ಗ್ರಾಮಸ್ಥರಿಗೆ ತಿಳಿಸಿದ್ದಾರೆ. ಈ ಬಗ್ಗೆ ವಿಚಾರ ತಿಳಿದ ಕೊಳ್ಳೇಗಾಲ ಬಫರ್ ವಲಯದ ಆರ್ಎಫ್ಒ ರವಿ ಕುಮಾರ್ ಮತ್ತು ತಂಡ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.