ಬಾಗಲಕೋಟೆ: ಜಿಲ್ಲೆಯ ಎಲ್ಲ ನಗರಗಳಲ್ಲಿ ಇಮ್ಮಡಿ ಪುಲಿಕೇಶಿ ಅವರ ಪುತ್ಥಳಿ ಸ್ಥಾಪಿಸಿ, ನಗರದಲ್ಲಿ ಕರವೇ ಪ್ರತಿಭಟನೆ,ಸಿಎಂ ಅವರಿಗೆ ಮನವಿ
ಬಾದಾಮಿ ಪಟ್ಟಣ ಸೇರಿ ಬಾಗಲಕೋಟ ಜಿಲ್ಲೆಯ ಎಲ್ಲ ನಗರಗಳಲ್ಲಿ ಚಾಲುಕ್ಯ ದೊರೆ ಇಮ್ಮಡಿ ಪುಲಿಕೇಶಿ ಅವರ ಪುತ್ಥಳಿ ಸ್ಥಾಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬಾಗಲಕೋಟೆ ನಗರದಲ್ಲಿಂದು ಹೆಚ್.ಶಿವರಾಮೇಗೌಡರ ಬಣದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.ನವಗರದ ಜಿಲ್ಲಾಡಳಿತ ಭವನದ ಮುಂದೆ ಕರವೇ ಜಿಲ್ಲಾಧ್ಯಕ್ಷ ಬಸವರಾಜ ಧರ್ಮಂತಿ ನೇತೃಯ ಪ್ರತಿಭಟನೆ ನಡೆಸಿದ ಕರವೇ ಕಾರ್ಯಕರ್ತರು ,ನೌಕಾದಳದ ಪಿತಾಮಹ ಎಂದು ಪೋಷಿಸುವುದು ಹಾಗೂ ಬಾಗಲಕೋಟೆ ನಗರದ ರೈಲು ನಿಲ್ದಾಣಕ್ಕೆ ಇಮ್ಮಡಿ ಪುಲಿಕೇಶಿ ಅವರ ಹೆಸರು ಇಡುವಂತೆ ಒತ್ತಾಯಿಸಿ ಡಿಸಿ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.