ಹೊಸ ವರ್ಷದ ಹಿನ್ನೆಲೆ ಸಿಸಿಬಿ ಭರ್ಜರಿ ಬೇಟೆ, ನ್ಯೂ ಇಯರ್ ಗೆ ಕಿಕ್ಕೇರಿಸಲು ಶೇಖರಿಸಿಟ್ಟಿದ್ದ ಕೋಟಿ- ಕೋಟಿ ಡ್ರಗ್ ವಶಕ್ಕೆ ಒಡೆದ ಸಿಸಿಬಿ ಅಧಿಕಾರಿಗಳು. ಬರೋಬ್ಬರಿ 28 ಕೋಟಿ ಮೌಲ್ಯದ ಮಾದಕ ವಸ್ತು ಸೀಜ್ ಮಾಡಿದ ಪೊಲೀಸರು. ಬುಧವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಸಂಪಿಗೆ ಹಳ್ಳಿಯಲ್ಲಿ ಪ್ರತ್ಯೇಕ ಎರಡು ಪ್ರಕರಣಗಳಲ್ಲಿ 20 ಕೋಟಿ ಮೌಲ್ಯದ 10 ಕೆಜಿ ಎಂಡಿಎಂಎ ಸೀಜ್ ಮಾಡಿರುವ ಸಿಸಿಬಿ ಪೊಲೀಸರು, ಇಬ್ಬರು ವಿದೇಶಿ ಪ್ರಜೆಗಳನ್ನು ಬಂಧಿಸಿದ್ದಾರೆ. ತಾಂಜೇನಿಯಾ ಮೂಲದ ನ್ಯಾನ್ಸಿ, ನೈಜಿರೀಯಾ ಮೂಲದ ಎಮುನಲ್ ಅರೆಂಜಿ ಇಡಿಕೋ ಬಂಧಿತ ಆರೋಪಿಗಳು. ಟೂರಿಸ್ಟ್ ವೀಸಾದಲ್ಲಿ ಭಾರತಕ್ಕೆ ಬಂದಿದ್ದ ಆರೋಪಿಗಳು, ದೆಹಲಿಯಿಂದ ಡ್ರಗ್ಸ್ ತರಿಸಿ ನ್ಯೂ ಇಯರ್ ಗಾಗಿ ಮನೆಯಲ್ಲಿ ಶೇಖರಿಸಿಟ್ಟಿದ್ದರು.