ವಿಜಯಪುರ: ಜಲಾಶಯ ಎತ್ತರದಿಂದ ಭೂಮಿ ಕಳೆದುಕೊಳ್ಳುವ ರೈತರಿಗೆ 1 ಕೋಟಿ ಹಾಗೂ 80 ಲಕ್ಷದಷ್ಟು ಪರಿಹಾರ ನೀಡಬೇಕು : ನಗರದಲ್ಲಿ ಮುಖಂಡ ನಿಂಗನಗೌಡ ಪಾಟೀಲ
ಆಲಮಟ್ಟಿ ಜಲಾಶಯ ಎತ್ತರಕ್ಕೆ ಇಂದು ನಿರ್ಧಾರ ಮಾಡಲಾಗಿದೆ. ಮಾಜಿ ಪ್ರಧಾನಿ ದೆವೇಗೌಡರ ಪ್ರಧಾನಿ ಇದ್ದಾಗ ಎತ್ತರಕ್ಕೆ ಅನುಮೋದನೆ ಕೊಟ್ಟಿದ್ದರು. ಕೃಷ್ಣಾ ಮೇಲ್ದಂಡೆ ಯೋಜನೆಗೆ 1600 ಕೋಟಿ ಕೊಟ್ಟಿದ್ದರು. ಜಲಾಶಯ ಎತ್ತರಕ್ಕೆ ಈಗ ಕಾಂಗ್ರೆಸ್ ಸರ್ಕಾರ ಅನುಮೋದನೆ ಕೊಟ್ಟಿದ್ದು ಸ್ವಾಗತಾರ್ಹ, ಆದರೆ ಭೂಮಿ ಕಳೆದುಕೊಂಡ ರೈತರಿಗೆ ನೀರಾವರಿಗೆ ಒಂದು ಕೋಟಿ ಹಾಗೂ ಒಣ ಬೇಸಾಯದ ಭೂಮಿಗೆ 80 ಲಕ್ಷ ಕೊಡಬೇಕು ಎಂದು ನಿಂಗನಗೌಡ ಪಾಟೀಲ ಹೇಳಿದರು...