ಕಾರವಾರ: ತವರಿನಲ್ಲೇ ಪದವೀಧರರಿಗೆ ಉದ್ಯೋಗ ಸೃಷ್ಟಿ ನನ್ನ ಮೊದಲ ಆದ್ಯತೆ: ನಗರದಲ್ಲಿ ಡಾ. ಎಸ್.ಜಿ. ಸೊನೆಖಾನ್
ನಗರದ ಪತ್ರಿಕಾಭವನದಲ್ಲಿ ಶುಕ್ರವಾರ ಮಧ್ಯಾಹ್ನ 2ಕ್ಕೆ ಪತ್ರಿಕಾಗೋಷ್ಠಿ ನಡೆಸಿದ, ಪಶ್ಚಿಮ ಪದವೀಧರರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಡಾ. ಎಸ್.ಜಿ. ಸೊನೆಖಾನ್ ಪದವಿ ಮುಗಿಸಿದ ತಕ್ಷಣ ಉದ್ಯೋಗಕ್ಕಾಗಿ ಬೆಂಗಳೂರಿನತ್ತ ಮುಖಮಾಡುವ ಅನಿವಾರ್ಯತೆಯನ್ನು ತಪ್ಪಿಸಿ, ಪದವೀಧರರಿಗೆ ತಮ್ಮ ಸ್ವಂತ ಊರಿನಲ್ಲೇ ಗೌರವಯುತ ಉದ್ಯೋಗ ದೊರಕಿಸಿಕೊಡುವ ನಿಟ್ಟಿನಲ್ಲಿ ಪ್ರಥಮ ಆಧ್ಯತೆ ನೀಡುವುದಾಗಿ ಹೇಳಿದರು.