ಚಾಮರಾಜನಗರ: ತಾಲೂಕಿನ ಮರೆಯಾಲ ಬಳಿ ನಡೆದ ಅಪಘಾತದಲ್ಲಿ ಬೈಕ್ ಸವಾರನೋರ್ವನಿಗೆ ಪೆಟ್ಟಾಗಿರುವ ಘಟನೆ ಸಂಭವಿಸಿದೆ. ಮರೆಯಾಲ ಗೇಟ್ ಬಳಿ ವೇಗ ನಿಯಂತ್ರಣವಿಲ್ಲದೆ ಸ್ಪ್ಲೆಂಡರ್ ಬೈಕ್ನಲ್ಲಿ ಬಂದ ಸರಗೂರಿನ ಶಿವಲಿಂಗ. ಎಂಬ ಯುವಕ, ರಸ್ತೆ ಬದಿಯಲ್ಲಿ ನಿಲ್ಕಿಸಲಾಗಿದ್ದ ತ್ರಿವೀಲರ್ ಗೂಡ್ಸ್ ಆಟೋಗೆ ಹಿಂದೆಯಿಂದ ಡಿಕ್ಕಿ ಹೊಡೆದಿದ್ದಾರೆ. ಇದರ ಪರಿಣಾಮವಾಗಿ ಈ ಅಪಘಾತದಲ್ಲಿ ಅವರಿಗೆ ಪೆಟ್ಟಾಗಿದೆ ಸ್ಥಳೀಯರ ಹೇಳಿಕೆ ಪ್ರಕಾರ, ರಸ್ತೆಯಲ್ಲಿ ಡಿಕ್ಕಿಗಳನ್ನು ತಪ್ಪಿಸಲು ಅಗತ್ಯವಾದ ಕಡೆ ಹಂಪ್ ಗಳನ್ನು ಸರಿಯಾಗಿ ಅಳವಡಿಸದಿರುವುದು ಹಾಗೂ ವಾಹನಗಳು ವೇಗ ನಿಯಂತ್ರಣವಿಲ್ಲದೆ ಚಲಿಸುವುದು ಪ್ರತಿದಿನವೂ ಅಪಘಾತಗಳಿಗೆ ಕಾರಣವಾಗುತ್ತಿದೆ. ಅಪಘಾತಗಳನ್ನು ತಪ್ಪಿಸಲು ವೇಗ ನಿಯಂತ್ರಣಕ್ಕಾಗಿ ಹಂಪ್ಗಳನ್ನು ನಿರ್ಮಿಸುವಂತೆ ಒತ್ತಾಯಿಸಿದ್ದಾರೆ