ಕೊಪ್ಪ: ರಸ್ತೆ ಬದಿಯಲ್ಲೇ ಬೀಡುಬಿಟ್ಟ ಕಾಡುಕೋಣಗಳ ಹಿಂಡು.! ಪಟ್ಟಣದ ಸುತ್ತಮುತ್ತ ಕಾಡು ಪ್ರಾಣಿ ಕಾಟ.!
ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡುಪ್ರಾಣಿ ಹಾಗೂ ಮಾನವನ ಸಂಘರ್ಷ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಲೇ ಇದೆ. ಕೊಪ್ಪಟ್ಟಣದ ಸಮೀಪ ಕಾಡುಕೋಣಗಳ ಹಿಂದು ರಸ್ತೆ ಬದಿಯಲ್ಲಿಯೇ ಬಿಡು ಬಿಟ್ಟಿದ್ದು ವಾಹನ ಸವಾರರು ರಸ್ತೆಯಲ್ಲಿ ಓಡಾಡಲು ಭಯ ಬೀಳುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಬೀಡು ಬಿಟ್ಟಿರುವುದನ್ನು ಕಂಡು ಆಟೋ ಚಾಲಕನೊಬ್ಬ ತನ್ನ ಮೊಬೈಲ್ ನಲ್ಲಿ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.