ಕಲಬುರಗಿ ಬೀದರ್ ಹೈದ್ರಾಬಾದ್ ನಡುವೆ ಸಂಚಾರ ಮಾಡುವ ಪ್ರತಿಯೊಂದು ಸಾರಿಗೆ ಬಸ್ ಕಮಲಾಪುರದಲ್ಲಿ ನಿಲ್ಲುಗಡೆ ಆಗಬೇಕೆಂದು ಆಗ್ರಹಿಸಿ ಕಮಲಾಪುರ ನಾಗರೀಕರು ಪಟ್ಟಣದ ಬಸ್ ನಿಲ್ದಾಣದ ಮುಂಭಾಗದಲ್ಲಿ ರಸ್ತೆ ತಡೆದು ಶುಕ್ರವಾರ 4 ಗಂಟೆ ಸುಮಾರಿಗೆ ಪ್ರತಿಭಟಿಸಿದರು. ಪ್ರತಿಭಟನೆ ಹಿನ್ನಲೆ ಸುಮಾರು ಒಂದು ಕೀಲೋ ಮೀಟರ್ ದೂರದವರೆಗೆ ವಾಹನಗಳು ಸರದಿಸಾಲಿನಲ್ಲಿ ನಿಂತು ಸುಮಾರುಹೊತ್ತು ಸಂಚಾರಕ್ಕೆ ಬಾರಿ ಅಡಚಣೆವುಂಟಾಯಿತು.