ಮಣ್ಣಲ್ಲಿ ಮಣ್ಣಾದ ಮೇಟಿ. ಸ್ವಗ್ರಾಮ ತಿಮ್ಮಾಪೂರದಲ್ಲಿ ನಡೆದ ಮೇಟಿ ಅವರ ಅಂತ್ಯಕ್ರಿಯೆ. ಕುರುಬ ಸಮುದಾಯದ ಸಂಪ್ರದಾಯದಂತೆ ನಡೆದ ಅಂತ್ಯಕ್ರಿಯೆ.ತಂದೆ ತಾಯಿಗಳ ಸಮಾಧಿ ಪಕ್ಕದಲ್ಲೇ ನೆರವೇರಿದ ಎಚ್.ವೈ.ಮೇಟಿ ಅವರ ಅಂತ್ಯಕ್ರಿಯೆ.ಅಂತ್ಯಕ್ರಿಯೆಯಲ್ಲಿ ಭಾಗಿಯಾದ ಸಿಎಂ ಸಿದ್ದರಾಮಯ್ಯ. ಸಿಎಂಗೆ ಸಚಿವರಾದ ಎಂ.ಬಿ.ಪಾಟೀಲ್, ಸತೀಶ ಜಾರಕಿಹೊಳಿ, ಭೈರತಿ ಸುರೇಶ್, ಮಹಾದೇವಪ್ಪ ಮತ್ತು ಪುತ್ರ ಯತೀಂದ್ರ ಸಾಥ್.ಬಾಗಲಕೋಟೆ ಜಿಲ್ಲೆಯ ತಿಮ್ಮಾಪೂರ ಗ್ರಾಮದಲ್ಲಿ ನಡೆದ ಅಂತ್ಯಕ್ರಿಯೆ. ಗಾಳಿಯಲ್ಲಿ ಮೂರು ಸುತ್ತು ಹಾರಿಸಿ ಅಂತಿಮನಮನ. ರಾಷ್ಟ್ರಧ್ವಜವನ್ನ ಕುಟುಂಬಸ್ಥರಿಗೆ(ಪುತ್ರರಾದ ಮಲ್ಲಿಕಾರ್ಜುನ ಹಾಗೂ ಉಮೇಶ ಅವರಿಗೆ) ಹಸ್ತಾಂತರಿಸಿದ ಸಿಎಂ