ಬೀದರ್: ನಗರದಲ್ಲಿ ಶಿಕ್ಷಣ ಪ್ರೇಮಿ ಡಾ. ಅಬ್ದುಲ್ ಕದೀರಗೆ ಸಾರ್ವಜನಿಕರಿಂದ ತೆರೆದ ವಾಹನದಲ್ಲಿ ಅದ್ದೂರಿ ಮೆರವಣಿಗೆ
Bidar, Bidar | Nov 5, 2025 ಶಿಕ್ಷಣ ಪ್ರೇಮಿ ಡಾ. ಅಬ್ದುಲ್ ಕಧೀರ್ ಅವರನ್ನು ಬೀದರ್ ನ ನಿವಾಸಿಗಳು ಬುಧುವಾರ ಸಂಜೆ 6:30ಕ್ಕೆ ತೆರೆದ ವಾಹನದಲ್ಲಿ ಅದ್ದೂರಿಯಾಗಿ ಭವ್ಯ ಮೆರವಣಿಗೆಯನ್ನು ನಡೆಸಿದರು. ಈ ವೇಳೆ ರಸ್ತೆಯ ಎರಡು ಬದಿಗಳಲ್ಲಿ ಛಾವಣಿಯ ಮೇಲೆ ನಿಂತು ಸಾರ್ವಜನಿಕರು ಡಾ. ಅಬ್ದುಲ್ ಖಾದಿರ್ ಅವರ ಮೇಲೆ ಪುಷ್ಪವೃಷ್ಟಿ ಗೈದು ಶುಭ ಕೋರುತ್ತಿರುವುದು ಕಂಡುಬಂತು. ನಿನ್ನಯಷ್ಟೇ ನಗರದ ಚನ್ನಬಸವ ಪಟ್ಟ ದೇವರ ರಂಗ ಮಂದಿರದಲ್ಲಿ ಕನ್ನಡಪರ ಸಂಘಟನೆಗಳು ಮತ್ತು ಪೂಜ್ಯರು ಅಭಿನಂದನ ಸಮಾರಂಭ ಆಯೋಜಿಸಿದ್ದರು.