ಯಡ್ರಾಮಿ ತಾಲ್ಲೂಕಿನ ಪತ್ರಕರ್ತ ಪ್ರಶಾಂತ ಚವ್ಹಾಣ ಅವರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ತಕ್ಷಣ ಬಂಧಿಸಿ ಕಠಿಣ ಶಿಕ್ಷೆಗೆ ಒಲಪಡಿಸಬೇಕೆಂದಜ ಆಳಂದ ತಾಲೂಕಾ ಪರ್ತಕರ್ತರ ಸಂಘದಿಂದ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು. ಹಿರಿಯ ಪತ್ರಕರ್ತ ಮಹಾದೇವ್ ವಡಗಾಂವ್ ಮಾತನಾಡಿ, ರಾತ್ರಿ ವೇಳೆ ಕೆಲ ವ್ಯಕ್ತಿಗಳು ಗುಂಪು ಕಟ್ಟಿಕೊಂಡು ಮನೆಗೆ ಬಂದು ಪ್ರಶಾಂತ ಹಾಗೂ ಅವರ ಸಹೋದರನ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೆ, ಮನೆ ಸುತ್ತಲೂ ಓಡಾಡಿ ಭಯ ಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ಕೂಡಲೇ ಪೊಲೀಸರು ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು. ಶುಕ್ರವಾರ 2 ಗಂಟೆಗೆ ಮನವಿ ಸಲ್ಲಿಸಿದರು..