ಮಂಡ್ಯ: ವಿಶ್ವಕರ್ಮ ಪ್ರಪಂಚದ ಮೊದಲ ಇಂಜಿನಿಯರ್ : ನಗರದಲ್ಲಿ ಶಾಸಕ ಪಿ. ರವಿಕುಮಾರ್
Mandya, Mandya | Sep 17, 2025 ದೇವರುಗಳಿಗೂ ಮನೆ ನಿರ್ಮಾಣ ಮಾಡಿದ ವಿಶ್ವಕರ್ಮ ಅವರನ್ನು ದೇಶದ ಮೊದಲ ಇಂಜಿನಿಯರ್ ಎನ್ನಬಹುದು ಎಂದು ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ಪಿ ರವಿಕುಮಾರ್ ಅವರು ಹೇಳಿದರು. ಬುಧವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ವಿಶ್ವಕರ್ಮದವರು ಇರದಿದ್ದರೆ ವಾಸವಿರಲು ಮನೆಗಳು ಇರುತ್ತಿರಲಿಲ್ಲ. ಇಂದು ಅಯೋಧ್ಯೆ , ಕನ್ಯಾಕುಮಾರಿ, ಕೇದಾರನಾಥ ಇವೆಲ್ಲಾ ದೇವಾಲಯಗಳಿಗೆ ಅಡಿಪಾಯ ಹಾಕಿದವರು ಹಾಗೂ ಜಗತ್ತಿನ ಮೊದಲ ದೇವಾಲಯವನ್ನು ನಿರ್ಮಿಸಿದವರು ವಿಶ್ವಕರ್ಮ. ವಿಶ್ವಕರ್ಮದವರು ಇಲ್ಲವೆಂದರೆ ರೈತರಿಗೆ ಉಳಿಮೆ ಮಾಡಲು ನೇಗಿಲು ಇರುವುದಿಲ್ಲ ಎಂದರು.