ಧಾರವಾಡದಲ್ಲಿ ಕಾರು ಅಪಘಾತದಲ್ಲಿ ಲೋಕಾಯುಕ್ತ ಸಿಪಿಐ ಸಾಲಿಮಠ ಸಾವು ಪ್ರಕರಣ ಇಂದು ಶನಿವಾರ 4 ಗಂಟೆಗೆ ಸವದತ್ತಿ ತಾಲೂಕಿನ ಸ್ವಗ್ರಾಮ ಮುರಗೋಡಕ್ಕೆ ಮೃತದೇಹ ಬರುತ್ತಿದ್ದಂತೆ ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ ಮುರಗೋಡ ಗ್ರಾಮದ ಮನೆ ಮುಂದೆ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು ನಂತರ ಮೃತದೇಹಕ್ಕೆ ಹೂಹಾರ ಹಾಕಿ ಶ್ರದ್ಧಾಂಜಲಿ ಸಲ್ಲಿಸಿದ ಸಾರ್ವಜನಿಕರು ಇದೇ ವೇಳೆ ಪೊಲೀಸ ವರಿಷ್ಠಾಧಿಕಾರಿ ಡಾ ಭೀಮಾಶಂಕರ ಗುಳೇದ ಸೇರಿ ಹಲವು ಅಧಿಕಾರಿಗಳಿಂದ ಗೌರವ ಸಲ್ಲಿಕೆ ಮಾಡಲಾಯಿತು ಸಿಪಿಐ ಪಂಚಾಕ್ಷರಿ ಸಾಲಿಮಠ ಮೃತದೇಹದ ಮುಂದೆ ಕಣ್ಣಿರಿಟ್ಟ ಎಸ್ಪಿ ಹಾಗೂ ಡಿವೈಎಸ್ ಪಿ. ಸಾಲಿಮಠ ಅವರನ್ನ ನೆನೆದು ಕಣ್ಣಿರಿಟ್ಟ ಬೈಲಹೊಂಗಲ ಡಿವೈಎಸ್ ಪಿ ವೀರಯ್ಯ ಹಿರೇಮಠ.