ಸದನದಲ್ಲಿ ಬಿಜೆಪಿಯಿಂದ ಕಾನೂನು ಸುವ್ಯವಸ್ಥೆ ಬಗ್ಗೆ ಚರ್ಚೆ ವಿಚಾರಕ್ಕೆ ಸಂಬಂಧಿಸಿ ಶನಿವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಸದಾಶಿವನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ, ಬಿಜೆಪಿಯವರು ಸದನದಲ್ಲಿ ಚರ್ಚೆ ಮಾಡಲಿ. ನಾವು ಅದಕ್ಕೆ ಸೂಕ್ತ ಉತ್ತರ ಕೊಡ್ತೇವೆ. ಅಂಕಿ ಅಂಶ ಸಮೇತ ಸಮಂಜಸ ಉತ್ತರ ಕೊಡ್ತೇವೆ. ಅವರ ಅವಧಿಯಲ್ಲಿ ಏನೆಲ್ಲ ಆಗಿತ್ತು, ನಮ್ಮ ಅವಧಿಯಲ್ಲಿ ಏನಾಗಿದೆ, ನಾವು ಏನು ಕ್ರಮ ತಗೊಂಡಿದೀವಿ ಅಂತ ಉತ್ತರ ಕೊಡ್ತೇವೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆದ ಘಟನೆಗಳು ಯಾವಾಗ ಆದವು, ಬಹಳಷ್ಟು ಘಟನೆಗಳು ಯಾವಾಗ ಆದವು ಅಂತ ಹೇಳ್ತೇವೆ. ಯಾರ ಆಡಳಿತದಲ್ಲಿ ಬಹಳಷ್ಟು ಘಟನೆಗಳು ನಡೆದಿವೆ ಅಂತ ಹೇಳ್ತೇವೆ ಎಂದರು.