ಕಮಲಾಪುರದಲ್ಲಿ ಮೊಹರಂ ದೇವರ ಹಿಡಿಯುವ ವಿಚಾರವಾಗಿ ನಡೆದ ಜಗಳದಿಂದ ವ್ಯಕ್ತಿಯ ಕೊಲೆ ನಡೆದಿದೆ. ಹನಿಪಸಾಬ ನೈಕೊಡಿ (70) ಕೊಲೆಯಾದ ವ್ಯಕ್ತಿಯಾಗಿದ್ದು, 26 ವರ್ಷದ ರಿಜವಾನ ಕೊಲೆ ಆರೋಪಿ ಎನ್ನಲಾಗುತ್ತಿದೆ. ಕೊಲೆಯಾದ ಹನಿಪಸಾಬ ಮುಂಚಿನಿಂದಲು ಮೊಹರಂ ಸಂದರ್ಭದಲ್ಲಿ ದೇವರು ಹಿಡಿಯುವ ವಿಧಿ ಪಾಲಿಸುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಅದೇ ಸಂಪ್ರದಾಯವನ್ನು ರಿಜವಾನ ಮಾಡತೊಡಗಿದ್ದು, ಕಳೆದ ಮೊಹರಂ ಹಬ್ಬದಲ್ಲೇ ಇಬ್ಬರ ನಡುವೆ ವಾಗ್ವಾದ ಜೋರಾಗಿತ್ತು. ಅದರ ಪರಿಣಾಮವಾಗಿ ವೈಷಮ್ಯ ಬೆಳೆದಿತ್ತು. ಶನಿವಾರವೂ ಇದೇ ವಿಚಾರಕ್ಕೆ ಮತ್ತೆ ಜಗಳ ನಡೆದಿದ್ದು, ಇಬ್ಬರೂ ಠಾಣೆಗೆ ತೆರಳುತ್ತಿದ್ದ ವೇಳೆ ರಿಜವಾನ ಚಾಕುವಿನಿಂದ ಹನಿಪಸಾಬಗೆ ಇರಿದಿದ್ದಾನೆಂದು ತಿಳಿದುಬಂದಿದೆ ಘಟನೆಯಲ್ಲಿ ಗಂಭೀರ ಗಾಯಗೊಂಡ ಹನಿಪಸಾಬ ಆಸ್ಪತ್ರೆಗೆ ಕೊಂಡೊಯ