ಕಲಬುರಗಿ ನಗರದ ವಾರ್ಡ್ ಸಂಖ್ಯೆ 41 ರ ಡಬ್ರಾಬಾದ್ ಸಮೀಪದ ಕೆಇಬಿ ಕಾಲೋನಿಯಲ್ಲಿ ಹೊಸ ರಸ್ತೆ ನಿರ್ಮಾಣ ಕಾಮಗಾರಿ ಗುದ್ದಲಿ ಪೂಜೆ ಆಗಮಿಸಿದ ಶಾಸಕಿ ಖನಿಜ ಫಾತೀಮಾ ಮತ್ತು ಶಾಸಕ ಅಲ್ಲಮಪ್ರಭು ಪಾಟೀಲ್ ಅವರಿಗೆ ಸ್ಥಳೀಯರು ಚರಂಡಿ ಸಮಸ್ಯೆ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಸ್ತೆ ಮಾಡುವ ಮೊದಲು ಚರಂಡಿ ನಿರ್ಮಿಸಬೇಕು ಎಂದು ಆಗ್ರಹಿಸಿದ್ದಾಗಿ ಸಾಮಾಜಿಕ ಹೋರಾಟಗಾರ ಹರುಣ್ ಖತೀಬ್ ಮಂಗಳವಾರ 4 ಗಂಟೆಗೆ ತಿಳಿಸಿದ್ದಾರೆ...