ಬಾಗಲಕೋಟೆ: ನಗರದಲ್ಲಿ ರಾಷ್ಟ್ರೀಯ ರೆಫರೆನ್ಸ್ ಸಿಮ್ಯುಲೇಶನ್ ಕೇಂದ್ರ ಹಾಗೂ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಪ್ರಮಾಣಿಕರಣ ಕೇಂದ್ರದ ಉದ್ಘಾಟನೆ
ಬಾಗಲಕೋಟೆಯ ಬಸವೇಶ್ವರ ಸಂಘದ ಎಸ್.ನಿಜಲಿಂಗಪ್ಪ ಮೆಡಿಕಲ್ ಕಾಲೇಜಿನ ಆವರಣದಲ್ಲಿ ಸಜ್ಜಲಶ್ರೀ ನರ್ಸಿಂಗ್ ಕಾಲೇಜಿನಲ್ಲಿ ಸ್ಥಾಪಿಸಿರುವ ರಾಷ್ಟ್ರೀಯ ರೆಫರೆನ್ಸ್ ಸಿಮ್ಯುಲೇಶನ್ ಕೇಂದ್ರ ಹಾಗೂ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಪ್ರಮಾಣಿಕರಣ ಕೇಂದ್ರವನ್ನು ನವದೆಹಲಿಯ ಇಂಡಿಯನ್ ನರ್ಸಿಂಗ್ ಕೌನ್ಸಿಲ್ ಅಧ್ಯಕ್ಷ ಡಾ.ಟಿ ದಿಲೀಪಕುಮಾರ ಉದ್ಘಾಟಿಸಿದ್ರು. ಇನ್ನು ಇದೇ ವೇಳ ರಾಷ್ಟ್ರೀಯ ರೆಫರೆನ್ಸ್ ಸಿಮ್ಯುಲೇಶನ್ ಕೇಂದ್ರದಲ್ಲಿ ಇಂದಿನಿಂದ ಅಂದ್ರೆ ಡಿಸೆಂಬರ್ 5 ರಿಂದ 7 ರ ವರೆಗೆ ಮೂರು ದಿನಗಳ ಕಾಲ ಅಂತರರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಲಾಗಿದ್ದು, ಇದರಲ್ಲಿ ಇಂಗ್ಲೆಂಡ್, ಆಸ್ಟ್ರೆಲಿಯಾ, ಸಿಂಗಪೂರ ದೇಶಗಳಿಂದ ನರ್ಸಿಂಗ್ ವಿಜ್ಞಾನದ ತಜ್ಞರು ಸಮ್ಮೇಳನದಲ್ಲಿ ವಿಶೇಷ ಉಪನ್ಯಾಸ ಮತ್ತು ಶಿಬಿರಾರ್ಥಿಗಳಿಗೆ ತರಬೇತಿ ನೀಡುತ್ತಿದೆ.