ಸಂಘಕ್ಕೆ ಹೋಗುವುದಾಗಿ ತೆರಳಿದ್ದ ಪತ್ನಿ ಹಾಗೂ ಮಗ ಕಾಣೆಯಾದ ಘಟನೆ ಯಳಂದೂರು ತಾಲೂಕಿನ ಸುತ್ತೂರು ಇರಸವಾಡಿ ಗ್ರಾಮದಲ್ಲಿ ನಡೆದಿದೆ. ಶಾಲಿನಿ ಹಾಗೂ ಹೇಮಂತ್ ಎಂಬವರು ಕಾಣೆಯಾದವರು. ಮನೆಯಿಂದ ಯಳಂದೂರು ಪಟ್ಟಣದ ಸಂಘದ ಕಚೇರಿಗೆ ಹಣ ಕಟ್ಟಲು ಹೋಗಿ ಬರುತ್ತೇನೆ ಎಂದು ಹೇಳಿ ಹೋದವರು ವಾಪಸ್ ಮನೆಗೆ ಬಂದಿರುವುದಿಲ್ಲ, ತನ್ನ ಹೆಂಡತಿ ಮತ್ತು ಮಗುವನ್ನು ಪತ್ತೆ ಮಾಡಿಕೊಡಬೇಕೆಂದು ಪತಿ ಚೇತನ್ ಯಳಂದೂರು ಠಾಣೆಗೆ ದೂರು ಕೊಟ್ಟಿದ್ದಾರೆ. ಶಾಲಿನಿ ಅವರಿಗೆ 28 ವರ್ಷವಾಗಿದ್ದು ಹೇಮಂತ್ ಗೆ 3 ವರ್ಷವಾಗಿದೆ. ಸದ್ಯ, ಯಳಂದೂರು ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ . ಕಾಣೆಯಾದವರ ಗುರುತು ಪತ್ತೆಯಾದರೇ ಪೊಲೀಸರನ್ನು ಸಂಪರ್ಕಿಸಬಹುದಾಗಿದೆ.