ಕಲಬುರಗಿ : ಡಿಸೆಂಬರ್ 10 ರಂದು ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಕನಕಪುರ ಗ್ರಾಮದಲ್ಲಿ ಅಶ್ವರೂಢ ಬಸವೇಶ್ವರ ಕಂಚಿನ ಮೂರ್ತಿ ಲೋಕಾರ್ಪಣೆ ಕಾರ್ಯಕ್ರಮ ಅದ್ಧೂರಿಯಾಗಿ ಹಮ್ಮಿಕೊಳ್ಳಲಾಗಿದೆ ಎಂದು ಮೂರ್ತಿ ಅನಾವರಣ ಸಮಿತಿ ಅಧ್ಯಕ್ಷ ರೇವಣಸಿದ್ದಯ್ಯ ಮಠ್ ಹೇಳಿದ್ದಾರೆ.. ಡಿ5 ರಂದು ಮಧ್ಯಾನ 12 ಗಂಟೆಗೆ ಕಲಬುರಗಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮ ನಿಮ್ಮಿತ್ತ ಪ್ರವಚನಕಾರರಾಗಿ ಬೀದರ್ನ ಬಸವ ಸೇವಾ ಪ್ರತಿಷ್ಠಾನದ ಡಾ ಗಂಗಾಬಿಕ ಅಕ್ಕನವರು ಆಗಮಿಸಲಿದ್ದು, ಅನೇಕ ರಾಜಕೀಯ ಗಣ್ಯರು, ಮಠಾಧೀಶರು ಭಾಗಿಯಾಗಲಿದ್ದಾರೆಂದು ಹೇಳಿದರು.